Glossary

ಸಾಮಾನ್ಯ

Bilingual courses are courses which are taught in two languages. All students will hear daily meditation instructions in both languages. The evening discourses will be heard separately.

Old students are those who have completed a 10-day Vipassana Meditation course with S.N. Goenka or his Assistant Teachers. Old students have the opportunity to provide Dhamma Service at the courses listed.

All courses are run solely on a donation basis. All expenses are met by donations from those who, having completed a course and experienced the benefits of Vipassana, wish to give others the same opportunity. Neither the Teacher nor the assistant teachers receive remuneration; they and those who serve the courses volunteer their time. Thus Vipassana is offered free from commercialisation.

Meditation courses are held at both center and non-center locations. Meditation centers are dedicated facilities where courses are held regularly throughout the year. Before meditation centers were established in this tradition, all courses were held at temporary sites, such as campgrounds, religious retreat centers, churches and the like. Today, in regions where centers have not yet been established by local students of Vipassana who live in the area, 10 Day meditation courses are held at non-center course sites.


Course Type

Old Student Short Courses (1-3 days) are for any student who has completed the 10-day course with S.N. Goenka and his assistant teachers. All old students are welcome to apply to attend these courses, including those where it has been some time since their last course.

10-ದಿನದ ಶಿಬಿರಗಳು ವಿಪಶ್ಯನ ಧ್ಯಾನದ ಪರಿಚಯಾತ್ಮಕ ಶೀಬೇರವಾಗಿದ್ದು, ಅಲ್ಲಿ ವಿಧಾನವನ್ನು ಪ್ರತಿದಿನ ಹಂತ ಹಂತವಾಗಿ ಕಲಿಸಲಾಗುತ್ತದೆ. 2 ರಿಂದ 4 ಗಂಟೆಯ ನೋಂದಣಿ ಅವಧಿ ಮತ್ತು ಪೂರ್ವಾಭಿಮುಖದ ನಂತರ ಶಿಬಿರ ಪ್ರಾರಂಭವಾಗುತ್ತದೆ, ನಂತರ 10 ಪೂರ್ಣ ದಿನಗಳ ಧ್ಯಾನ, ಮತ್ತು 11 ನೇ ದಿನದ ಬೆಳಿಗ್ಗೆ 7: 30 ಕ್ಕೆ ಕೊನೆಗೊಳ್ಳುತ್ತದೆ.

10-ದಿನದ ಕಾರ್ಯನಿರ್ವಾಹಕ ಶಿಬಿರಗಳು ವಿಶೇಷವಾಗಿ ವ್ಯವಹಾರ ಕಾರ್ಯನಿರ್ವಾಹಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿಪಶ್ಯನ ಧ್ಯಾನದ ಒಂದು ಪರಿಚಯಾತ್ಮಕ ಶಿಬಿರವಾಗಿದ್ದು, ಅಲ್ಲಿ ವಿಧಾನವನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕಾರ್ಯನಿರ್ವಾಹಕ ಶಿಬಿರ ವೆಬ್‌ಸೈಟ್ ಗೆ ಭೇಟಿ ನೀಡಿ. 2 ರಿಂದ 4 ಗಂಟೆಯ ನೋಂದಣಿ ಅವಧಿ ಮತ್ತು ಪೂರ್ವಾಭಿಮುಖದ ನಂತರ ಶಿಬಿರ ಪ್ರಾರಂಭವಾಗುತ್ತದೆ, ನಂತರ 10 ಪೂರ್ಣ ದಿನಗಳ ಧ್ಯಾನ, ಮತ್ತು 11 ನೇ ದಿನದ ಬೆಳಿಗ್ಗೆ 7: 30 ಕ್ಕೆ ಕೊನೆಗೊಳ್ಳುತ್ತದೆ.

ಹಳೆಯ ಸಾಧಕರ 10-ದಿನದ ಶಿಬಿರಗಳು ಸಾಮಾನ್ಯ 10-ದಿನದ ಶಿಬಿರಗಳಂತೆಯೇ ಒಂದೇ ವೇಳಾಪಟ್ಟಿ ಮತ್ತು ಶಿಸ್ತನ್ನು ಹೊಂದಿವೆ. ಈ ಶಿಬಿರಗಳು ಕನಿಷ್ಟ ಮೂರು 10-ದಿನದ ಶಿಬಿರಗಳನ್ನು ಮತ್ತು ಒಂದು ಸತಿಪಟ್ಠಾನ ಸುತ್ತ ಶಿಬಿರವನ್ನು ಪೂರ್ಣಗೊಳಿಸಿದ, ಕಳೆದ 10-ದಿನದ ಶಿಬಿರದಿಂದ ಬೇರೆ ಯಾವುದೇ ಧ್ಯಾನ ವಿಧಾನಗಳನ್ನು ಅಭ್ಯಾಸ ಮಾಡದಿರುವ, ಕನಿಷ್ಠ ಒಂದು ವರ್ಷದಿಂದ ಈ ವಿಪಶ್ಯನ  ವಿಧಾನವನ್ನು ಅಭ್ಯಾಸ ಮಾಡುತ್ತಿರುವ, ತಮ್ಮ ದೈನಂದಿನ ಜೀವನದಲ್ಲಿ ಐದು ಶೀಲಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಮತ್ತು ದೈನಂದಿನ ಅಭ್ಯಾಸವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಗಂಭೀರ ಹಳೆಯ ಸಾಧಕರಿಗೆ ತೆರೆದಿದೆ.

ವಿಶೇಷ 10-ದಿನದ ಶಿಬಿರಗಳು ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಿಗೆ ಮಾತ್ರ ತೆರೆದಿರುತ್ತದೆ, ಅವರು ಕನಿಷ್ಠ ಐದು 10-ದಿನದ ಶಿಬಿರಗಳನ್ನು ಪೂರ್ಣಗೊಳಿಸಿರಬೇಕು, ಒಂದು ಸತಿಪಟ್ಠಾನ ಸೂತ್ತ ಶಿಬಿರ ಪೂರ್ಣಗೊಳಿಸಿರಬೇಕು, ಕನಿಷ್ಠ ಒಂದು 10-ದಿನದ ಶಿಬಿರದಲ್ಲಿ ಸೇವೆ ಸಲ್ಲಿಸಿರಬೇಕು, ಮತ್ತು ಕನಿಷ್ಠ ಎರಡು ವರ್ಷಗಳಿಂದ ನಿಯಮಿತವಾಗಿ ಅಭ್ಯಾಸ ಮಾಡುತ್ತಿರಬೇಕು

The 14-Day Gratitude Course was previously called the Teacher's Self Course. One of the qualities we develop as we meditate is gratitude - gratitude towards one’s teachers, Goenkaji and Mataji, and towards the long tradition of Vipassana teachers, right back to the Buddha.

The course is open to old students who are active in giving service. Requirements include 3 x 10day courses plus one Satipaṭṭhāna course, being active in Dhamma service, trying to maintain two-hour daily practice since last 10-Day course, and trying to maintain the five precepts to the best of one's ability. Local teacher’s recommendation is required. The course follows the usual format of 3x group sittings with instructions in the day, but students work more independently and the teaching materials are drawn from the 20-day course. This is a half-way step to help students mature for long courses, and serves to inspire students to work more deeply in Dhamma.

20-ದಿನದ ಶಿಬಿರಗಳು ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಿಗೆ ಮಾತ್ರ ತೆರೆದಿರುತ್ತದೆ, ಅವರು ಕನಿಷ್ಠ ಐದು 10-ದಿನದ ಶಿಬಿರಗಳನ್ನು ಪೂರ್ಣಗೊಳಿಸಿರಬೇಕು, ಒಂದು ಸತಿಪಟ್ಠಾನ ಸೂತ್ತ ಶಿಬಿರ ಪೂರ್ಣಗೊಳಿಸಿರಬೇಕು, ಕನಿಷ್ಠ ಒಂದು 10-ದಿನದ ಶಿಬಿರದಲ್ಲಿ ಸೇವೆ ಸಲ್ಲಿಸಿರಬೇಕು, ಮತ್ತು ಕನಿಷ್ಠ ಎರಡು ವರ್ಷಗಳಿಂದ ನಿಯಮಿತವಾಗಿ ಅಭ್ಯಾಸ ಮಾಡುತ್ತಿರಬೇಕು.

30-ದಿನದ ಶಿಬಿರಗಳು ಕನಿಷ್ಠ ಆರು 10-ದಿನದ ಶಿಬಿರಗಳನ್ನು (ಅವರ ಮೊದಲ 20-ದಿನದ ಶಿಬಿರದಿಂದ ಒಂದು), ಒಂದು 20-ದಿನದ ಶಿಬಿರ, ಒಂದು ಸತಿಪಟ್ಠಾನ ಸುತ್ತ ಶಿಬಿರವನ್ನು ಪೂರ್ಣಗೊಳಿಸಿದ ಮತ್ತು ಕನಿಷ್ಠ ಎರಡು ವರ್ಷಗಳಿಂದ ನಿಯಮಿತವಾಗಿ ಅಭ್ಯಾಸ ಮಾಡುತ್ತಿರುವ ಈ ವಿಧಾನಕ್ಕೆ ಬದ್ಧರಾಗಿರುವ ಗಂಭೀರ ಹಳೆಯ ಸಾಧಕರಿಗೆ ಮಾತ್ರ ತೆರೆದಿದೆ.

45-ದಿನದ ಶಿಬಿರಗಳು ಕನಿಷ್ಠ ಏಳು 10-ದಿನದ ಶಿಬಿರಗಳನ್ನು(ಅವರ ಮೊದಲ 30-ದಿನದ ಶಿಬಿರದಿಂದ ಒಂದು), ಎರಡು 30-ದಿನದ ಶಿಬಿರಗಳು, ಒಂದು ಸತಿಪಟ್ಠಾನ ಸುತ್ತ ಶಿಬಿರವನ್ನು ಪೂರ್ಣಗೊಳಿಸಿದ ಮತ್ತು ಕನಿಷ್ಠ ಮೂರು ವರ್ಷಗಳಿಂದ ನಿಯಮಿತವಾಗಿ ಅಭ್ಯಾಸ ಮಾಡುತ್ತಿರುವ ಧಮ್ಮ ಸೇವೆಯಲ್ಲಿ ತೊಡಗಿರುವ ಸಾಧಕರಿಗೆ ಮತ್ತು ಸಹಾಯಕ ಆಚಾರ್ಯರಿಗೆ ಮಾತ್ರ ತೆರೆದಿದೆ.

60-ದಿನದ ಶಿಬಿರಗಳು ಎರಡು 45-ದಿನದ ಶಿಬಿರಗಳನ್ನು ಪೂರ್ಣಗೊಳಿಸಿದ ಮತ್ತು ವಾರ್ಷಿಕವಾಗಿ ಕನಿಷ್ಠ 4 ಶಿಬಿರಗಳನ್ನು ನಡೆಸಿದ ಸಕ್ರಿಯ ಆಚಾರ್ಯರು ಮತ್ತು ಸಹಾಯಕ ಆಚಾರ್ಯರಿಗೆ ಮಾತ್ರ ತೆರೆದಿದೆ.

ಮಕ್ಕಳ ಶಿಬಿರಗಳು ಧ್ಯಾನ ಕಲಿಯಲು ಬಯಸುವ 8-12 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗ ತೆರೆದಿರುತ್ತವೆ. ಅವರ ಪೋಷಕರು / ಪಾಲಕರು ಹಳೆಯ ಸಾಧಕರಾಗಿರಬೇಕಾಗಿಲ್ಲ.

ಹಳೆಯ ಸಾಧಕರ ಕಾರ್ಯಕ್ರಮಗಳು ಸೇವಾ ಅವಧಿಗಳಿಗೆ ಹೋಲುತ್ತವೆ, ಅಲ್ಲಿ ವಿವಿಧ ಕೇಂದ್ರದ ನಿರ್ವಹಣೆ, ನಿರ್ಮಾಣ, ಮನೆ ಮತ್ತು ತೋಟಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡಲು ಸಮಯವಿದೆ, ಇಲ್ಲಿ ಅದರ ಸಮೇತ ಹೆಚ್ಚು ಪೂರ್ಣ ಮತ್ತು ರಚನಾತ್ಮಕ ಕಾರ್ಯಕ್ರಮ, ಸಹಾಯಕ ಆಚಾರ್ಯರನ್ನು ಭೇಟಿ ಮಾಡುವ ಅವಕಾಶ, ಮತ್ತು ಬಹುಶಃ ಸಮಿತಿ ಮತ್ತು ಟ್ರಸ್ಟ್ ಸಭೆಗಳು ಇರುತ್ತವೆ. ಎಲ್ಲಾ ಹಳೆಯ ಸಾಧಕರಿಗೆ ಭಾಗವಹಿಸಲು ಸ್ವಾಗತವಿದೆ. ದೈನಂದಿನ ಕಾರ್ಯಕ್ರಮವು ಬೆಳಿಗ್ಗೆ ಮತ್ತು ಮಧ್ಯಾಹ್ನ ಕೆಲಸದ ಅವಧಿಗಳೊಂದಿಗೆ ಮೂರು ಬಾರಿ ಸಾಮೂಹಿಕ ಧ್ಯಾನವನ್ನು ಒಳಗೊಂಡಿರುತ್ತದೆ ಮತ್ತು ಸಂಜೆ ಹಳೆಯ ವಿದ್ಯಾರ್ಥಿಗಳಿಗೆ ಎಸ್. ಎನ್. ಗೋಯೆಂಕಾ ನೀಡಿರುವ ವಿಶೇಷ ಪ್ರವಚನಗಳು ಮತ್ತು ಮಾತುಕತೆಗಳ ಟೇಪ್‌ಗಳನ್ನು ಹಾಕಲಾಗುತ್ತದೆ.

ತೆರೆದ ದಿನಗಳು ಧ್ಯಾನ ಶಿಬಿರಗಳ ನಡುವೆ ನಡೆಯುತ್ತವೆ. ವಿಪಶ್ಯನ ಧ್ಯಾನ ಮತ್ತು ಕೇಂದ್ರದ ಬಗ್ಗೆ ಕಲಿಯಲು ಎಲ್ಲರಿಗೂ ಸ್ವಾಗತ.

ಸತಿಪಟ್ಠಾನ ಸುತ್ತ ಶಿಬಿರಗಳು 10-ದಿನದ ಶಿಬಿರಗಳಂತೆಯೇ ವೇಳಾಪಟ್ಟಿ ಮತ್ತು ಶಿಸ್ತನ್ನು ಹೊಂದಿವೆ. ವ್ಯತ್ಯಾಸವೆಂದರೆ ಟೇಪ್ ಮಾಡಿದ ಸಂಜೆಯ ಪ್ರವಚನಗಳಲ್ಲಿ ಸತಿಪಟ್ಠಾನ ಸುತ್ತವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. ವಿಪಶ್ಯನ ಧ್ಯಾನವನ್ನು ವ್ಯವಸ್ಥಿತವಾಗಿ ವಿವರಿಸುವ ಪ್ರಮುಖ ಪಠ್ಯ ಇದು. ಈ ಶಿಬಿರಗಳು ಕನಿಷ್ಠ ಮೂರು 10-ದಿನದ ಶಿಬಿರಗಳಲ್ಲಿ ಕುಳಿತುಕೊಂಡಿರುವ(ಸೇವೆ ಸಲ್ಲಿಸಿದ ಶಿಬಿರಗಳನ್ನು ಒಳಗೊಂಡಿಲ್ಲ), ಕಳೆದ 10-ದಿನದ ಶಿಬಿರದಿಂದ ಬೇರೆ ಯಾವುದೇ ಧ್ಯಾನ ವಿಧಾನಗಳನ್ನು ಅಭ್ಯಾಸ ಮಾಡದಿರುವ, ವಿಪಶ್ಯನದ ಈ ವಿಧಾನವನ್ನು ಕನಿಷ್ಠ ಒಂದು ವರ್ಷ ಅಭ್ಯಾಸ ಮಾಡುತ್ತಿರುವ, ಮತ್ತು ತಮ್ಮ ಧ್ಯಾನ ಅಭ್ಯಾಸ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಐದು ಶೀಲಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ(ಕನಿಷ್ಠ ಶಿಬಿರಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ) ಗಂಭೀರ ಹಳೆಯ ವಿದ್ಯಾರ್ಥಿಗಳಿಗೆ ತೆರೆದಿದೆ.

ಹಳೆಯ ಸಾಧಕರ ಸ್ವಯಂ ಶಿಬಿರಗಳು 10-ದಿನದ ಶಿಬಿರಗಳಂತೆಯೇ ವೇಳಾಪಟ್ಟಿ ಮತ್ತು ಶಿಸ್ತನ್ನು ಹೊಂದಿವೆ. ವ್ಯತ್ಯಾಸವೆಂದರೆ ಆಚಾರ್ಯರು ಇರುವುದಿಲ್ಲ. ಈ ಶಿಬಿರಗಳು ಕನಿಷ್ಟ ಮೂರು 10-ದಿನದ ಶಿಬಿರಗಳನ್ನು ಪೂರ್ಣಗೊಳಿಸಿದ, ತಮ್ಮ ಕೊನೆಯ 10-ದಿನದ ಶಿಬಿರದಿಂದ ಬೇರೆ ಯಾವುದೇ ಧ್ಯಾನ ವಿಧಾನಗಳನ್ನು ಅಭ್ಯಾಸ ಮಾಡದ, ಕನಿಷ್ಠ ಒಂದು ವರ್ಷದಿಂದ ಈ ವಿಪಶ್ಯನ ವಿಧಾನವನ್ನು ಅಭ್ಯಾಸ ಮಾಡುತ್ತಿರುವ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಐದು ಶೀಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಗಂಭೀರ ಹಳೆಯ ಸಾಧಕರಿಗೆ ತೆರೆದಿದೆ.

ಸೇವಾ ಅವಧಿಗಳು ವಿವಿಧ ಕೇಂದ್ರದ ನಿರ್ವಹಣೆ, ನಿರ್ಮಾಣ, ಮನೆ ಮತ್ತು ತೋಟಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡಲು ಮೀಸಲಿಡಲಾಗಿದೆ. ಭಾಗವಹಿಸಲು ಎಲ್ಲಾ ಹಳೆಯ ಸಾಧಕರಿಗೆ ಸ್ವಾಗತ. ದೈನಂದಿನ ಕಾರ್ಯಕ್ರಮವು ಬೆಳಿಗ್ಗೆ ಮತ್ತು ಮಧ್ಯಾಹ್ನ ಕೆಲಸದ ಅವಧಿಗಳೊಂದಿಗೆ ಮೂರು ಸಾಮೂಹಿಕ ಧ್ಯಾನದ ಅವಧಿಗಳನ್ನು ಒಳಗೊಂಡಿರುತ್ತದೆ. ಆಯ್ದ ಸಂಜೆಗಳಲ್ಲಿ, ಎಸ್.ಎನ್. ಗೋಯೆಂಕಾ ಹಳೆಯ ವಿದ್ಯಾರ್ಥಿಗಳಿಗೆ ನೀಡಿದ ವಿಶೇಷ ಪ್ರವಚನಗಳು ಮತ್ತು ಮಾತುಕತೆಗಳ ಟೇಪ್‌ಗಳು ಹಾಕಲಾಗುತ್ತದೆ.

ಹದಿವಯಸ್ಕರ ಆನಾಪಾನ ಶಿಬಿರಗಳು 13-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಭ್ಯವಿದೆ. ಅವರ ಪೋಷಕರು/ಪಾಲಕರು ವಿಪಶ್ಯನ ಸಾಧಕರಾಗಿರಬೇಕಾಗಿಲ್ಲ.