Welcome

ವಿಪಶ್ಯನ , ಎಂದರೆ ವಸ್ತುಸ್ಥಿತಿಗಳನ್ನು ಅವು ಇರುವಂತೆಯೇ ನೋಡುವುದು ಎಂದರ್ಥ. ಇದು ಭಾರತದ ಅತ್ಯಂತ ಪುರಾತನ ಧ್ಯಾನ ವಿಧಾನಗಳಲ್ಲಿ ಒಂದಾಗಿದೆ. ಸಾರ್ವತ್ರಿಕ ಕಾಯಿಲೆಗಳಿಗೆ ಸಾರ್ವತ್ರಿಕ ಪರಿಹಾರವಾಗಿ ಇದನ್ನು ೨೫೦೦ ವರ್ಷಗಳ ಹಿಂದೆ ಭಾರತದಲ್ಲಿ ಕಲಿಸಲಾಯಿತು. ಸಂಕ್ಪಿಪ್ತವಾಗಿ, ಇದೊಂದು ಜೀವನ ಕಲೆ. ವಿಪಶ್ಯನ ಧ್ಯಾನದ ಪರಿಚಯವಿಲ್ಲದವರಿಗಾಗಿ, ಶ್ರೀ ಗೋಯಂಕಾರವರ ವಿಪಶ್ಯನದ ಒಂದು ಪರಿಚಯ ಮತ್ತು ಸಂಬಂಧಿಸಿದ ವೀಡಿಯೋಗಳು ಮತ್ತು ಪ್ರಶ್ನೋತ್ತರಗಳು ವಿಪಶ್ಯನದ ಬಗ್ಗೆ ಪ್ರಶ್ನೋತ್ತರಗಳು ಲಭ್ಯವಿದೆ.

ಶಿಬಿರಗಳು

ಈ ವಿಪಶ್ಯನ ಧ್ಯಾನ ಸಾಧನೆಯನ್ನು ಹತ್ತು ದಿನಗಳ ವಸತಿ ಶಿಬಿರಗಳಲ್ಲಿ ಕಲಿಸಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವವರು ಈ ಧ್ಯಾನ ಪದ್ಧತಿಯ ಪ್ರಾಥಮಿಕ ಪಾಠಗಳನ್ನು ಕಲಿಯುತ್ತಾರೆ ಮತ್ತು ಅದರ ಪ್ರಯೋಜನಕಾರಿ ಫಲಿತಾಂಶಗಳನ್ನು ಅನುಭವದಿಂದ ತಿಳಿಯಲು ಸಾಕಾಗುವಷ್ಟು ಅಭ್ಯಾಸ ಮಾಡುತ್ತಾರೆ. ಶಿಬಿರಗಳಿಗೆ ಯಾವುದೇ ಶುಲ್ಕಗಳಿಲ್ಲ. ಊಟ ಮತ್ತು ವಸತಿ ಖರ್ಚನ್ನು ಭರಿಸಲೂ ಶುಲ್ಕ ವಿಧಿಸುವುದಿಲ್ಲ. ಈಗಾಗಲೇ ಶಿಬಿರದಲ್ಲಿ ಭಾಗವಹಿಸಿ ವಿಪಶ್ಯನದ ಪ್ರಯೋಜನಗಳನ್ನು ಅನುಭವಿಸಿರುವ ಜನರು ಇತರರೂ ಈ ಪ್ರಯೋಜನಗಳನ್ನು ಪಡೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ನೀಡಿದ ದೇಣಿಗೆಯಿಂದ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಾಗುವುದು.

ಸ್ಥಳಗಳು

ಹಲವಾರು ಧ್ಯಾನಕೇಂದ್ರಗಳಲ್ಲಿ ಮತ್ತು ಬಾಡಿಗೆ ಪಡೆದ ಕೇಂದ್ರೇತರ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗುವುದು. ಪ್ರತಿಯೊಂದು ಕೇಂದ್ರವೂ ಶಿಬಿರಗಳ ತನ್ನದೇ ಪಟ್ಟಿಯನ್ನು ಹೊಂದಿರುತ್ತದೆ. ಈ ಶಿಬಿರಗಳಿಗೆ ಪ್ರವೇಶ ಪಡೆಯಲು ಹೆಚ್ಚಿನ ಸಂದರ್ಭಗಳಲ್ಲಿ ವೆಬ್‌ಸೈಟ್‌ ಮೂಲಕ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಪಂಚದಾದ್ಯಂತ ಅನೇಕ ವಿಪಶ್ಯನ ಕೇಂದ್ರಗಳಿವೆ ಭಾರತದಲ್ಲಿ ಮತ್ತು ಬೇರೆಡೆಯಲ್ಲಿ ಏಷಿಯಾ/ಪೆಸಿಫಿಕ್‌ ದೇಶಗಳಲ್ಲಿ, ಉತ್ತರ ಅಮೇರಿಕದಲ್ಲಿ, ಲ್ಯಾಟಿನ್‌ ಅಮೇರಿಕದಲ್ಲಿ, ಯೂರೋಪ್‌ನಲ್ಲಿ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ದೇಶದಲ್ಲಿ, ಮಿಡಲ್ ಈಸ್ಟ್ ದೇಶಗಳಲ್ಲಿ ಮತ್ತು ಆಫ್ರಿಕ ದೇಶದಲ್ಲಿ ಕೇಂದ್ರಗಳಿವ. ಹತ್ತು ದಿನಗಳ ಕೇಂದ್ರೇತರ ಶಿಬಿರಗಳನ್ನು ಕೇಂದ್ರದ ಹೊರಗಿನ ಅನೇಕ ಸ್ಥಳಗಳಲ್ಲಿ, ಸ್ಥಳೀಯ ವಿಪಶ್ಯನದ ವಿದ್ಯಾರ್ಥಿಗಳು ಏರ್ಪಡಿಸುವುದರಿಂದ ನಡೆಸಲಾಗುವುದು. ಪ್ರಪಂಚದಾದ್ಯಂತ ಶಿಬಿರದ ಸ್ಥಳಗಳ ವರ್ಣಮಾಲೆಯ ಪಟ್ಟಿಯ ಪ್ರಕಾರ ಲಭ್ಯವಿದೆ ಮತ್ತು ಪ್ರಪಂಚದಾದ್ಯಂತ ಹಾಗೂ ಭಾರತ ಮತ್ತು ನೇಪಾಳದಲ್ಲಿನ ಶಿಬಿರದ ಸ್ಥಳಗಳನ್ನು ಗುರುತಿಸಿರುವ ನಕ್ಷೆಯೂ ಲಭ್ಯವಿದೆ.

ವಿಶೇಷ ಶಿಬಿರಗಳು ಮತ್ತು ಸಂಪನ್ಮೂಲಗಳು

ವಿಪಶ್ಯನ ಧ್ಯಾನ ಶಿಬಿರಗಳನ್ನು ಜೈಲುಗಳಲ್ಲೂ ಆಯೋಜಿಸಲಾಗುತ್ತಿದೆ. ಬ್ಯುಸಿನೆಸ್ ಎಕ್ಸಿಕ್ಯೂಟಿವ್ (ವ್ಯಾವಹಾರಿಕ ಕಾರ್ಯನಿರ್ವಾಹಕರು) ಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿಶೇಷವಾದ ೧೦ ದಿನಗಳ ವಿಪಶ್ಯನ ಶಿಬಿರಗಳನ್ನು ಪ್ರಪಂಚದಾದ್ಯಂತ ಹಲವಾರು ಕೇಂದ್ರಗಳಲ್ಲಿ ನಿಯತವಾಗಿ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಎಕ್ಸಿಕ್ಯೂಟಿವ್ ಶಿಬಿರಗಳ ವೆಬಸೈಟ್ಗೆ ಭೇಟಿ ನೀಡಿ. ವಿಪಶ್ಯನ ಧ್ಯಾನದ ಮಾಹಿತಿಯು ಇತರ ಭಾಷೆಗಳಲ್ಲಿಯೂ ಲಭ್ಯವಿದೆ. ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಪುಟದ ಮೇಲಿನ ಬಲಭಾಗದಲ್ಲಿರುವ ಗ್ಲೋಬ್ ಮೇಲೆ ಕ್ಲಿಕ್ ಮಾಡಿ.